ಕರ್ನಾಟಕ ಸರ್ಕಾರವು ಸಂಗೀತಗಾರರಿಗೆ ಕನಕ-ಪುರಂದರ ಪ್ರಶಸ್ತಿಯನ್ನು ಪ್ರತಿವರ್ಷ ನೀಡುತ್ತದೆ. ಇದುವರೆಗೆ ಆರ್.ಕೆ. ಶ್ರೀಕಂಠನ್, ಹರಿಕಥಾ ವಿದ್ವಾಂಸ ಭದ್ರಗಿರಿ ಅಚ್ಯುತದಾಸರು(2000), ಪಿಟೀಲು ವಿದ್ವಾಂಸ ಆರ್. ಆರ್. ಕೇಶವಮೂರ್ತಿ, ವೀಣಾವಾದಕ ಎಂ.ಜೆ. ಶ್ರೀನಿವಾಸ ಅಯ್ಯಂಗಾರ್(2003), ವಸಂತ ಕನಕಾಪುರ(2004-05), ಮೌನೇಶ್ವರ ಶಾಸ್ತ್ರಿ ಗವಾಯಿ ಮುಂತಾದವರು ಕನಕ-ಪುರಂದರ ಪ್ರಶಸ್ತಿ ಪಡೆದಿದ್ದಾರೆ.